ವಿಜ್ಞಾನ ಕರ್ಣಾಟಕ
ಪ್ರಸಾರಾಂಗದಿಂದ ಪ್ರಕಟವಾದ ಎರಡನೆಯ ನಿಯತಕಾಲಿಕೆ ಇದು. ಪ್ರಬುದ್ಧ ಕರ್ಣಾಟಕದ ಚಿನ್ನದ ಹಬ್ಬದ ಹೊತ್ತಿಗಾದರೂ ವಿಜ್ಞಾನ ಪತ್ರಿಕೆಯೊಂದನ್ನು ಅಸ್ತಿತ್ವಕ್ಕೆ ತರಬೇಕೆಂದು ತೀರ್ಮಾನಿಸಿ ಸಂಪಾದಕ ಮಂಡಳಿಯು, ಅದು ‘Scientific American’ ಮಾದರಿಯಲ್ಲಿರಬೇಕೆಂದು ನಿಶ್ಚಯಿಸಲಾಯಿತು. ದೇ.ಜವರೇಗೌಡರ ಹಾರೈಕೆಯ ಫಲವಾಗಿ ಪ್ರಬುದ್ಧ ಕರ್ಣಾಟಕದ ಚಿನ್ನದ ಹಬ್ಬದ ಸವಿನೆನಪಿಗಾಗಿ ವಿಜ್ಞಾನ ಕರ್ಣಾಟಕವನ್ನು ಹುಟ್ಟು ಹಾಕಲಾಯಿತು. ಅದು 1969ರಲ್ಲಿ ಹುಟ್ಟಿತು. 1970ರ ನವೆಂಬರ್ ತಿಂಗಳಲ್ಲಿ ಪತ್ರಿಕೆಯಾಗಿ ಆರಂಭವಾಯಿತು. ಇದರ ಮೊದಲ ಸಂಚಿಕೆಯ ಸಂಪಾದಕರಾಗಿ ಬಿ.ಎಸ್.ಬೋಲೆಗೌಡ, ಜೆ.ಆರ್. ಲಕ್ಷ್ಮಣರಾವ್ ಕಾರ್ಯ ನಿರ್ವಹಿಸಿದರು.
ವಿಜ್ಞಾನ ಕರ್ಣಾಟಕ ಪ್ರಬುದ್ಧ ಕರ್ಣಾಟಕದ ಮಗಳು ಎಂದು ದೇ.ಜವರೇಗೌಡರು ಹೇಳುತ್ತಾರೆ. ಇದಕ್ಕಾಗಿ ದುಡಿದ ಮಹನೀಯರುಗಳು ಕನ್ನಡದ ಹೆಮ್ಮೆಯ ಸಾಹಿತಿಗಳು, ಇವರ ಆಸಕ್ತಿ ಮತ್ತು ಅಭಿವ್ಯಕ್ತಿಗಳು ಹೊಸ ಆಲೋಚನೆಗೆ ಎಡೆಮಾಡಿಕೊಟ್ಟವು. ಈ ಮಾತಿಗೆ ಹೊಂದಿಕೊಂಡಂತೆ ಜೆ.ಆರ್. ಲಕ್ಷ್ಮಣರಾಯರನ್ನು ಕುರಿತು ದೇ.ಜವರೇಗೌಡರು ಆಡಿರುವ ಮಾತುಗಳು ಇಲ್ಲಿ ಸ್ತುತ್ಯಾರ್ಹವೆನಿಸುತ್ತವೆ. “1562 ಪುಟಗಳ ಪ್ರಮಾಣವುಳ್ಳ 57 ಲೇಖನಗಳನ್ನು ವಿಜ್ಞಾನ ಸಂಚಿಕೆಗೆ ಕೂಡಿಹಾಕಿರುವ ಅವರ ಸಾಹಸ ಶ್ಲಾಘನೀಯವಾದದ್ದು. ಕಳೆದ ಇಪ್ಪತ್ತೈದು ವರ್ಷಗಳ ವೈಜ್ಞಾನಿಕ ಪ್ರಗತಿಯ ಕತೆ ಈ ಲೇಖನಗಳ ವಸ್ತು, ಬಹುಶಃ ಯಾವ ಭಾರತೀಯ ಭಾಷೆಯಲ್ಲಿಯೂ ಈವರೆಗೆ ಇಂಥದೊಂದು ವ್ಯಾಪಕವಾದ ಗ್ರಂಥ ಬಂದಿಲ್ಲವೆಂದೇ ಹೇಳಬಹುದು. ಆ ಕ್ಷೇತ್ರದಲ್ಲಿ ಇದೊಂದು ಗೌರೀಶಂಕರ, ಅವರದ್ದು ತೇನ್‍ಸಿಂಗ್ ಸಾಹಸ! ಕನ್ನಡ ಮಾಧ್ಯಮ ವಿರೋಧಿಗಳಿಗೆ ಇದೊಂದು ಸಶಕ್ತ ಸವಾಲು! ಕನ್ನಡ ವೈಜ್ಞಾನಿಕ ಭಾಷೆಯಾಗಿಲ್ಲವೆಂದು ಕುಯ್‍ಗುಟ್ಟುವ ಸಂಶಯಗ್ರಸ್ಥರಿಗೆ ಇದೊಂದು ಗದಾ ಪ್ರಹಾರ!” ಎಂದರು. ಇಂಥ ಮಾತುಗಳು ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮಕ್ಕೆ ಬೆಲೆ ಇಲ್ಲದಿದ್ದಾಗ ಮೂಡಿ ಬಂದ ಈ ಸಂಚಿಕೆಗಳು ಅನ್ಯಭಾಷಿಕ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಅನಾದರ ತೋರುತ್ತಿದ್ದವರ ಬಾಯಿಮುಚ್ಚಿಸಲು ಕಾರಣವಾದುದನ್ನು ಇಲ್ಲಿ ತಿಳಿಯಬಹುದು.
ಅಲ್ಲದೆ ಕನ್ನಡ ಮಾಧ್ಯಮ ಮತ್ತು ಭಾಷೆಯಲ್ಲಿ ಯಾವ ಅಳುಕು ಇಲ್ಲದೆ ಬರೆಯುವವರಿದ್ದಾರೆ ಎಂಬುದನ್ನು ಎಚ್ಚರಿಸಿದವು. ಹಾಗೆಯೆ ವಿಜ್ಞಾನದ ಅನೇಕ ಸಂಗತಿಗಳು ಕನ್ನಡಿಗರಿಗೆ ತಿಳಿಯುವಂತಾದವು.
ವಿಜ್ಞಾನದ ಸಂಚಿಕೆಯಲ್ಲಿ ಮೂಡಿಬಂದ ಲೇಖನಗಳು ವಿಜ್ಞಾನದ ಬೆಳೆವಣಿಗೆ, ಪ್ರಸ್ತುತತೆಯಲ್ಲಿ ವಿಜ್ಞಾನದ ಕೊಡುಗೆ ಕುರಿತಂತೆ ಅಗ್ರಲೇಖನಗಳು ಇಲ್ಲಿ ಹೊರಬಿದ್ದವು. ವಿಜ್ಞಾನದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲುಗಳು ವಿಷಯ ಸೂಚಿಯಡಿ ಕೋಪರ್ನಿಕಸ್ ಮತ್ತು ಗೆಲಿಲಿಯೋ, ನ್ಯೂಟನ್ ಮತ್ತು ಲಿಬ್ನಿಜ್, ನ್ಯೂಟನ್ ಮತ್ತು ಭೌತಶಾಸ್ತ್ರ, ಜೇಮ್ಸ್ ವ್ಯಾಟ್ ಮತ್ತು ಉಗಿಯಂತ್ರ, ಮೈಕೆಲ್ ಪ್ಯಾರಡೆ, ಚಾಲ್ರ್ಸ್‍ಡಾರ್ವಿನ್, ಗ್ರೆಗೋರ್ ಮೆಂಡಲ್, ಲೂಯಿಪಾಶ್ಚರ್, ಮೇಡಂ ಮೇರಿಕ್ಯೂರಿ, ಆಲ್ಬರ್ಟ್ ಐನ್‍ಸ್ಟೆನ್, ಅಲೆಕ್ಸಾಂಡರ್ ಫ್ಲೆಮಿಂಗ್ ಮೊದಲಾದವರನ್ನು ಕುರಿತಂತೆ ಬಂದ ಲೇಖನಗಳು ಅವರುಗಳ ಸಂಕ್ಷಿಪ್ತ ಜೀವನ ಚರಿತ್ರೆ, ವೈಜ್ಞಾನಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಕನ್ನಡದಲ್ಲಿ ದೊರೆಯುವಂತೆ ಮಾಡಿದವು.
ಕಳೆದ ಇಪ್ಪತ್ತೈದು ವರ್ಷಗಳಲ್ಲಿ ವಿಜ್ಞಾನದ ಮುನ್ನಡೆ–ಒಂದು ಪಕ್ಷಿನೋಟ ವಿಷಯ ಸೂಚಿಯಲ್ಲಿ ಕನ್ನಡದ ಹೆಸರಾಂತ ವಿಜ್ಞಾನಿಗಳಾದ ಆರ್.ಎಲ್. ನರಸಿಂಹಯ್ಯನವರ ಭೌತವಿಜ್ಞಾನ, ಕೆ.ಶ್ರೀನಿವಾಸನ್ ಮತ್ತು ಜೆ.ಆರ್.ಲಕ್ಷ್ಮಣರಾವ್ ಅವರ ರಸಾಯನ ವಿಜ್ಞಾನ, ಎಂ.ಆರ್. ರಾಘವೇಂದ್ರರಾವ್ ಅವರ ಜೀವನರಸಾಯನ ವಿಜ್ಞಾನ, ಎಸ್.ವಿ.ರಾಮರಾವ್ ಅವರ ವೈದ್ಯವಿಜ್ಞಾನ, ಎಸ್.ಜಿ ರಾಮಚಂದ್ರ ಅವರ ಶಿಲ್ಪವಿಜ್ಞಾನ ಮೊದಲಾದ ವಿಜ್ಞಾನದ ಇತರ ಶಾಖೆಗಳ ಸಂಕ್ಷಿಪ್ತ ಪರಿಚಯ ಹಾಗೂ ಅವುಗಳ ಪ್ರಗತಿಯನ್ನು ಕುರಿತಂತೆ ವಿಷಯಗಳನ್ನು ತೆರೆದಿಡುತ್ತವೆ. ಇದರ ಜೊತೆಯಲ್ಲಿ ಪ್ರಪಂಚ ವಿಜ್ಞಾನ ಕುರಿತಂತೆ ಪರಮಾಣುಶಕ್ತಿ, ಮೂಲಕಣಗಳು, ಆಕರ ಸಂಶೋಧನೆ, ವಾಯುಯಾನ, ಮೇಸರ್ ಮತ್ತು ಲೇಸರ್ ರೇಡಿಯೋ, ಖಗೋಳ ವಿಜ್ಞಾನ, ಅತಿಶೈತ್ಯ ಅದರ ವೈಚಿತ್ರಗಳು, ಇತಿಹಾಸ ಸಂಶೋಧನೆ ವೈಜ್ಞಾನಿಕ ಸಾಧನಗಳು, ಜೀವರಸಾಯನ ಶಾಸ್ತ್ರದ ಸ್ವರೂಪ, ಜೀವನದ ಹುಟ್ಟು, ಪ್ಲಾಸ್ಟಿಕ್ಕುಗಳು ಮತ್ತು ಕೃತಕ ನೂಲುಗಳು, ಜೀವಕೋಶ, ತಳಿವಿಜ್ಞಾನ, ಮಾನವ ಕಲ್ಯಾಣಕ್ಕಾಗಿ ಸೂಕ್ಷ್ಮ ಜೀವಿಗಳು, ಆಂಟಿ-ಬಯೋಟಿಕ್ಸ್, ಹಾರ್ಮೋನುಗಳು, ಆಹಾರ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ, ಔಷಧಿಗಳಿಂದ ಮಾನಸಿಕ ಪರಿಣಾಮಗಳು, ಕ್ಯಾನ್ಸರ್ ಕುರಿತಂತೆ ಬಂದಿರುವ ಲೇಖನಗಳು ನಲವತ್ತೈದು ವರ್ಷಗಳ ಅನಂತರವೂ ತಮ್ಮ ಅಸ್ತಿತ್ವವನ್ನು ಕೆದಕುತ್ತಾ ಪ್ರಚಲಿತ ಸನ್ನಿವೇಶದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಹಾಗೂ ಸೂಕ್ಷ್ಮ ವಿಜ್ಞಾನದ ಕ್ಷೇತ್ರದಲ್ಲಿ ಇಂದಿಗೂ ಬಹು ಚರ್ಚೆಯೊಂದಿಗೆ ಪ್ರಯೋಗಿಕವಾಗಿ ಯಶಸ್ವು ಕಂಡುಬರುತ್ತಿರುವುದು ಇವುಗಳಿಂದ ತಿಳಿಯುವುದು. ದಿನ ಬೆಳಗಾಯಿತೆಂದರೆ ಪರಮಾಣು, ಮೂಲಕಣಗಳು, ಆಕಾರ ಸಂಶೋಧನೆ, ವಾಯುಯಾನ, ಜೀವಕೋಶ, ತಳಿಶಾಸ್ತ್ರ, ಆಂಟಿಬಯೋಟಿಕ್ಸ್, ಆಹಾರವಿಜ್ಞಾನ, ಔಷಧಿಗಳಿಂದಾಗುವ ಪರಿಣಾಮ ಕುರಿತಂತೆ ಬರುತ್ತಿರುವ ಹೊಸ ಹೊಸ ಸಂಶೋಧನೆಗಳು ಕನ್ನಡದಲ್ಲಿ ಅಂದೇ ಲೇಖನ ರೂಪದಲ್ಲಿ ಬಂದಿರುವುದು ಕನ್ನಡ ಓದುಗರಿಗೆ ಒಂದು ದೊಡ್ಡ ಕೊಡುಗೆಯೇ ಸರಿ.
Committee Members
SL No. | Name | Resume |
---|---|---|
1 | Dr. G. K. NAGARAJA Associate Professor Dept of Chemistry Mangalore University Mangalagangothri ,Mangalore-574 199 Karnataka E-mail: This email address is being protected from spambots. You need JavaScript enabled to view it. |
Click |
2 | Dr. Balakrishna Kalluraya Professor , Department of Chemistry Mangalore University Mangalagangotri, Mangalore- 574 199 Karnataka Email id: This email address is being protected from spambots. You need JavaScript enabled to view it./This email address is being protected from spambots. You need JavaScript enabled to view it. |
Click |
3 | Dr. Girish S Kesturu Professor, Department of Studies & Research in Biochemistry Tumkur University BH Road, Tumkur-572 103 Karnataka Email id: This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it. |
Click |
4 | Dr. R.S.UMAKANTH ASSOCIATE PROFESSOR Department of Studies in Sericulture Science, Nobel Laureates Avenue, University of Mysore, Manasagangothri, MYSURU – 570 006. Karnataka Email id: This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it. |
Click |
5 | Dr. K.C. NARAYANASWAMY Director of Education University of Agricultural Sciences, Bangalore, Karnataka Email Id: This email address is being protected from spambots. You need JavaScript enabled to view it. |
Click |
6 | Dr. S. SRIKANTASWAMY Profession, Department of studies in Environmental Science University of Mysore Manasagangothri, Mysure-570006 Karnataka Email id: This email address is being protected from spambots. You need JavaScript enabled to view it. |
Click |
7 | Dr. Sridhar M. Anandalwar Professor, Department of Studies in Physics University of Mysore Manasagangothri, Mysuru-570006 Karnataka Email Id: This email address is being protected from spambots. You need JavaScript enabled to view it. |
Click |
8 | Dr. SUTTUR.S.MALINI Professor, Dept. of Zoology, University of Mysore Manasagangothri, Mysore-06 Karnataka Email id: This email address is being protected from spambots. You need JavaScript enabled to view it. |
Click |
9 | Prof. H.S. Bhojya Naik Professor , Department of Industrial Chemistry Kuvempu University, Jnanasahyadri Shankaraghatta- 577451. Shimoga Dist. Karnataka Email id: This email address is being protected from spambots. You need JavaScript enabled to view it. |
Click |