• iconಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು-06
ಪ್ರಬುದ್ಧ ಕರ್ಣಾಟಕ

ಪ್ರಬುದ್ಧ ಕರ್ನಾಟಕ ಭಾರತದ ಕೆಲವೇ ಪ್ರೌಢ ಪತ್ರಿಕೆಗಳ ಶ್ರೇಣಿಯಲ್ಲಿ ಅಗ್ರಮಾನ್ಯವಾದುದು. ಪ್ರಬುದ್ಧ ಕರ್ಣಾಟಕ ಕೃಷ್ಣಶಾಸ್ತ್ರಿಗಳು ಕಟ್ಟಿದ ಪ್ರಭಾಪುಂಜ, ಪ್ರತಿಭಾವಲಯ, ಹೊಸಗನ್ನಡದಲ್ಲಿ ಒಂದು ಹೊಸ ಮನ್ವಂತರವನ್ನು ತೆರೆದ ಶಕ್ತಿಗಳಲ್ಲಿ ಪ್ರಬುದ್ಧ ಕರ್ನಾಟಕ ವಹಿಸಿದ ಪಾತ್ರ ಮಹತ್ತರವಾದುದೆಂಬುದನ್ನು ಎಂದಿಗೂ ಮರೆಯುವಂತಿಲ್ಲ. ಕರ್ನಾಟಕ ಸಂಘ ಅವರ ಪರಿಶ್ರಮದ ಫಲವಾದರೆ, ಪ್ರಬುದ್ಧ ಕರ್ಣಾಟಕ ಅವರ ಪ್ರತಿಭೆಯ ದೂರದೃಷ್ಟಿಗಳ ಫಲವಾಗಿದೆ.

ಅಖಂಡ ಕರ್ನಾಟಕದ ಮೊತ್ತವಾಗಿ ಜನ್ಮ ತಾಳಿದ ಕರ್ಣಾಟಕ ಸಂಘ ಕರ್ನಾಟಕ ಎಲ್ಲೆಡೆ ತನ್ನ ಶಾಖೋಪಶಾಖೆಗಳನ್ನು ವಿಸ್ತರಿಸಲು ಅನುವು ಮಾಡಿಕೊಟ್ಟಿತು. ಇದು ಪ್ರಶಂಸನಾರ್ಹ ವಿಷಯವಾಗಿ ಕಂಡು ಬರುತ್ತದೆ. ಇದರ ಸಹೋದರ ಸಂಘವಾಗಿ ಮಹಾರಾಜ ಕಾಲೇಜು, ಮೈಸೂರು ಇಲ್ಲಿ ‘ಕರ್ಣಾಟಕ ಸಂಘ’ ಉದಯವಾಯಿತು. ಕನ್ನಡ ಸಾಹಿತ್ಯದ ಪುನರುಜ್ಜೀವನದಲ್ಲಿ ಅತಿಶಯವಾಗಿ ಸೇವೆ ಮಾಡಿರುವ ಮೊಟ್ಟಮೊದಲ ‘ಕರ್ಣಾಟಕ ಸಂಘ’ಗಳೆರಡೂ ಸ್ಥಾಪಿತವಾದದ್ದು ವಿಶ್ವವಿದ್ಯಾ-ನಿಲಯದೊಳಗೆಯೇ. ಮುಂದೆ ಎರಡೂ ಸಂಘಗಳು ಸಮ್ಮಿಳಿತವಾಗಿ ‘ಪ್ರಬುದ್ಧ ಕರ್ನಾಟಕ’ ಬೆಳೆಯಲು ಅನುವು ಮಾಡಿಕೊಟ್ಟದಲ್ಲದೆ, ಎಲ್ಲಾ ಕರ್ಣಾಟಕ ಸಂಘಗಳಿಗೂ ಮಾದರಿಯಾಗಿ ಮಾತೃ ಸಂಘವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಂಘ ಗೋಚರವಾಯಿತು. ಇದಕ್ಕೆ ಸೆಂಟ್ರಲ್ ಕಾಲೇಜಿನ ಭೌತಶಾಸ್ತ್ರದ ಅಧ್ಯಾಪಕರಾಗಿದ್ದ ಬಿ. ವೆಂಕಟನಾರಣಪ್ಪ ಅವರನ್ನು ಮೊದಲು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಆಲೋಚಿಸಲಾಗಿತ್ತು. ಅಂತಿಮವಾಗಿ ಎ.ಆರ್. ಕೃಷ್ಣಶಾಸ್ತ್ರಿ ಅವರನ್ನೇ ಸಂಘದ ಅಧ್ಯಕ್ಷರಾಗಿ ನೇಮಿಸಲಾಯಿತು. ಮುಂದೆ ಇವರ ಸಂಪಾದಕತ್ವದಲ್ಲಿ ಬೆಳೆದ ಪ್ರಬುದ್ಧ ಕರ್ಣಾಟಕ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಪದವಿಗೂ ಏರಿಸಿತು ಎಂಬುದು ಗಮನಾರ್ಹ ವಿಷಯವಾಗಿ ಇಲ್ಲಿ ಗೋಚರವಾಗುತ್ತದೆ.

ಸೆಂಟ್ರಲ್ ಕಾಲೇಜಿನಲ್ಲಿ ತರುಣರನ್ನೂ ವಿದ್ವಾಂಸರನ್ನೂ ಬೇರೆ ಭಾಷೆಗಳ ವ್ಯಕ್ತಿಗಳನ್ನು ಪರಸ್ಪರ ಕಲೆಯುವಂತೆ ಮಾಡಲು ಕೃಷ್ಣಶಾಸ್ತ್ರಿಗಳು ಸ್ಥಾಪಿಸಿದ ವೇದಿಕೆಗಳು ಎರಡು, ಒಂದು ‘ಕರ್ನಾಟಕ ಸಂಘ”, ಮತ್ತೊಂದು 1919ರಲ್ಲಿ ಆರಂಭವಾದ ‘ಪ್ರಬುದ್ಧ ಕರ್ಣಾಟಕ’, ಯಾವುದೇ ಒಂದು ಪತ್ರಿಕೆ ಅಥವಾ ಕಾರ್ಯದ ಪ್ರಾರಂಭದ ಹಿಂದೆ ಆಗಾಧವಾದ ಆಶಯವಿರುತ್ತದೆ. ಅಲ್ಲದೆ ಅಂದಿನ ಸಾಮಾಜಿಕ ಸ್ಥಿತಿಗತಿಗಳು ಕಾರಣವಾಗಿ ಅವು ಜನ್ಮತಳೆಯುತ್ತವೆ. ಅದರಂತೆ 20ನೆಯ ಶತಮಾನದ ಆರಂಭದಲ್ಲಿ ಕನ್ನಡದ ಸ್ಥಿತಿಯೂ ಮೂಲೆ ಗುಂಪಾಗಿ, ಕನ್ನಡ ಎಂದರೆ ಅನಾದರ ತೋರುವ ಸ್ಥಿತಿಯಲ್ಲಿತ್ತು. ಆಗ ಕನ್ನಡಕ್ಕೆ ಮಿಡಿವ ಮನವಾಗಿ ಎ.ಆರ್. ಕೃಷ್ಣಶಾಸ್ತ್ರಿಗಳು ಕಂಡುಬಂದರು. ಮೂಲೆಗುಂಪಾಗಿದ್ದ ಕನ್ನಡಕ್ಕೆ ಒಂದು ಹೊಸ ಚೈತನ್ಯ ಕೊಡಲು ‘ಕರ್ನಾಟಕ ಸಂಘದ’ ನೆರಳಲ್ಲಿ ‘1919ರಲ್ಲಿ "ಪ್ರಬುದ್ಧ ಕರ್ಣಾಟಕ" ಪ್ರಾರಂಭವಾಯಿತು.

 

manavika5028129

  manavika5028129

  ecial 1 min

  manavikaspecial 2

 

Committee Members

SL No.NameResume
1 DR.C.B.HONNUSIDDARTHA
Professor, Center for Kannada Studies Bangalore University,
Jnanabharathi, Bangalore – 560056
Karnataka
Email id: This email address is being protected from spambots. You need JavaScript enabled to view it.
Click
2 Dr. N.K. Lolakshi
Professor In Kannada
Kuvempu Institute of Kannada Studies
University of Mysore
Manasagangothri , Mysure-57006
Karnataka
Email id: This email address is being protected from spambots. You need JavaScript enabled to view it.
Click
3 Prof. Tharakeshwar .V.B
Professor at The English And Foreign Languages University
University of Hyderabad,
Telangana- 500046
Email id: This email address is being protected from spambots. You need JavaScript enabled to view it.
Click
4 Dr. Vijayakumari, S. Karikal
Professor and Chairpersion
Kuvempu Institute of Kannada Studies
University of Mysore
Manasagangothri , Mysure-57006
Karnataka
Email id:This email address is being protected from spambots. You need JavaScript enabled to view it.
Click
5 Dr.Nagabhushana C
Professor, Centre for Kannada Studies
Bangalore University,
Jnanabharathi, Bangalore – 560056
Karnataka
Email id : This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it.
Click
6 Mohan kontar
Director, IQAC Cell & Professor,
Department of Translation Studies.
Kannada University, Hampi.
Karnataka
Email id: This email address is being protected from spambots. You need JavaScript enabled to view it.
Click
7 Dr.Manjunath M.G
Professor of Kannada
Hemagangothri, Shanthigrama Post,
Hassan – 573226
Karnataka
Email id: This email address is being protected from spambots. You need JavaScript enabled to view it.
Click
8 Dr.Tamil selvi
Professor , Department of Kannada
University of Madras
Marina Campus, Chennai - 600 005
Tamil Nadu
Email id: This email address is being protected from spambots. You need JavaScript enabled to view it./This email address is being protected from spambots. You need JavaScript enabled to view it.
Click