• iconಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು-06

 

ಮಾನವಿಕ ಕರ್ಣಾಟಕ

ಪ್ರಬುದ್ಧ ಕರ್ನಾಟಕ ಚಿನ್ನದ ಹಬ್ಬದ ಹೊತ್ತಿಗೆ ‘ವಿಜ್ಞಾನ ಕರ್ಣಾಟಕ’ದ ಮೊದಲ ಸಂಚಿಕೆ ಪ್ರಾರಂಭವಾಯಿತು. ಅದರಲ್ಲಿ ಬರೆಯುತ್ತಾ ಅಂದು ಪ್ರಧಾನ ಸಂಪಾದಕರಾಗಿದ್ದ ದೇ.ಜವರೇಗೌಡರು “ಇದರಂತೆಯೇ ಸಮಾಜಶಾಸ್ತ್ರಗಳಿಗೆ ಮುಡಿಪಾದ ಮತ್ತೊಂದು ತ್ರೈಮಾಸಿಕ ‘ಮಾನವಿಕ ಕರ್ನಾಟಕ’ವೆಂಬ ಹೆಸರಿನಲ್ಲಿ ಬೇಗನೆ ರೂಪುಗೊಳ್ಳಲೆಂದು ಕನ್ನಡದ ಕುಲದೈವಕ್ಕೆ ವಿಶ್ವವಿದ್ಯಾನಿಲಯ ಭಗವತಿಗೆ ಪ್ರಾರ್ಥನೆ ಸಲ್ಲಿಸಿ ಸಂಪಾದಕ ಮಂಡಳಿಯ ಸಭೆಯಲ್ಲಿ ಕಾಣಿಸಿಕೊಂಡ ಸೂಚನೆಯನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಿದರು”. ಆದ್ದರಿಂದಲೆ ಮಾನವಿಕ ಕರ್ಣಾಟಕ ಬಹುಬೇಗನೆ ರೂಪುಗೊಳ್ಳಲು ಸಾಧ್ಯವಾಯಿತು. ಮಾನವಿಕ ವಿಷಯಗಳಿಗೆ ಮೀಸಲಾಗಿರುವ, ಅಭಿರುಚಿಯ ಓದುಗರಿಗೆ ಪ್ರಿಯವಾಗಿರುವ ಕನ್ನಡ ಪತ್ರಿಕೆಯಾಗಿ ಹೊರಬಿದ್ದಿತು.

‘ಮಾನವಿಕ ಕರ್ನಾಟಕ’ದ ಮೊದಲ ಸಂಚಿಕೆ-1970ರ ರಾಜ್ಯೋತ್ಸವದಂದು (ನವೆಂಬರ್ 1) ಪ್ರಕಟಿಸಬೇಕೆಂದು ನಿರ್ಧರಿಸಲಾಯಿತು. ಅದಕ್ಕೆ ವಿಶ್ವವಿದ್ಯಾನಿಲಯದ ಅನುಮತಿಯೂ ದೊರೆಯಿತು. ಅದರಂತೆ ಆ ದಿನದಂದೆ ಪ್ರಕಟವೂ ಆಯಿತು “ನಾಡಿನ ಶಿಕ್ಷಣ ಆಡಳಿತಗಳಲ್ಲಿ ಕನ್ನಡಕ್ಕೆ ಸಹಜವಾಗಿಯೇ ದೊರೆಯಬೇಕಾದ ಸ್ಥಾನಮಾನಗಳ ಬಗೆಗೆ ಹಿಂದೆಂದೂ ಕಾಣದ ಆಸೆ ಉತ್ಸಾಹಗಳು ಹೆಚ್ಚಾಗಿ ತೋರಿಬರುತ್ತಿರುವ ಈ ದಿನಗಳಲ್ಲಿ, ಕನ್ನಡವನ್ನು ಆ ಉದ್ದೇಶಗಳಿಗೆ ಸಜ್ಜುಗೊಳಿಸಬೇಕಾದುದು ಅದನ್ನು ಆಡುವವರ ಮೇಲಿನ ಹೊಣೆ..... ನಮ್ಮ ಭಾಷೆಗಳು ನಮ್ಮ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಾಗಲೆ ನಮ್ಮ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಲಭಿಸುವುದು. ನಮ್ಮ ಪ್ರಗತಿಗೆ ಲಾಭದಾಯಕವಾದ ಕೀಲಿಕೈ ದೊರೆಯುವುದು. ನಮ್ಮ ಭಾಷೆಗಳ ಬಳಕೆಯ ಅಗತ್ಯ ಈಗ ಚರ್ಚೆಯ ವಿಷಯವಾಗಿ ಉಳಿದಿಲ್ಲ. ಆ ಚರ್ಚೆಯನ್ನು ನಿಲ್ಲಿಸಿ ಕಾರ್ಯೋನ್ಮುಖವಾಗುವಲ್ಲಿ ‘ಮಾನವಿಕ ಕರ್ಣಾಟಕ’ದ ಪ್ರಕಟಣೆಯಂಥ ಸಂದರ್ಭಗಳು ಮಹತ್ವದ್ದಾಗಿದೆ.”

ಮಾನವಿಕ ಕರ್ನಾಟಕದ ಆರಂಭದ ಸಂಚಿಕೆಯಲ್ಲಿ ಪತ್ರಿಕೆಯ ವ್ಯಾಪ್ತಿ ಮತ್ತು ಉದ್ದೇಶವನ್ನು ಹೀಗೆ ಹೇಳಲಾಗಿದೆ. “ಈ ಪತ್ರಿಕೆಯ ವ್ಯಾಪ್ತಿ ವಿಶಾಲವಾದುದು. ವಿಜ್ಞಾನ ಸಾಹಿತ್ಯಗಳನ್ನುಳಿದು ಎಲ್ಲಾ ವಿಷಯಗಳು ಇದರ ಸೀಮೆಗೆ ಒಳಪಡುತ್ತವೆ. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮನಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಪುರಾತತ್ವ, ಪತ್ರಿಕೋದ್ಯಮ, ಭಾಷಾಶಾಸ್ತ್ರ, ಭೂಗೋಳಶಾಸ್ತ್ರ, ನ್ಯಾಯಶಾಸ್ತ್ರ, ಅಪರಾಧಶಾಸ್ತ್ರ, ಗ್ರಂಥಾಲಯಶಾಸ್ತ್ರ, ಮಾನವ ಶಾಸ್ತ್ರ, ವಾಣಿಜ್ಯ, ಸಂಗೀತ, ನೃತ್ಯ, ಚಿತ್ರಕಲೆ, ವಾಸ್ತುಶಿಲ್ಪ ಮುಂತಾದ ಕ್ಷೇತ್ರಗಳಲ್ಲಿ ಉಪಯುಕ್ತವೂ, ವಿಚಾರಪೂರ್ಣವೂ, ಸಂಶೋಧನಾತ್ಮಕವೂ ಆದ ಲೇಖನ, ವಿಮರ್ಶೆ ಪ್ರಬಂಧಗಳೇ ಮುಂತಾದವುಗಳನ್ನು ಪ್ರಕಟಿಸುವುದು ಪತ್ರಿಕೆಯ ಉದ್ದೇಶ”. ಇದರಂತೆ ಎಂಥ ವಿಷಯವನ್ನೇ ಆದರೂ ಕನ್ನಡದಲ್ಲಿ ಸಮರ್ಥವಾದ ರೀತಿಯಲ್ಲಿ ಹೇಳಬಹುದು ಎಂಬುದನ್ನು ಈ ಪತ್ರಿಕೆ ಸಾಧಿಸಿತೋರಿಸಿದೆ.

1970ರಲ್ಲಿ ಜನ್ಮತಳೆದ ಈ ನಿಯತಕಾಲಿಕೆಗೆ ಪ್ರಧಾನ ಸಂಪಾದಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿರುತ್ತಾರೆ. ಅದರಂತೆ ಪ್ರಥಮ ಸಂಚಿಕೆಯ ಪ್ರಧಾನ ಸಂಪಾದಕರು ಹಾ.ಮಾ.ನಾಯಕರು. ಎಚ್.ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) ಮತ್ತು ಎ.ವಿ.ನರಸಿಂಹಮೂರ್ತಿ ಇವರ ಪ್ರಥಮ ಸಂಪಾದಕರಾಗಿದ್ದರು.

manavika5028129

  manavika5028129

  ecial 1 min

  manavikaspecial 2

 

 

 

 

Committee Members

SL No.NameResume
1 Dr.K.SADASHIVA
Professor and Chairman , Department of Studies in History
University of Mysore
Manasagangotri, Mysuru-06
Karnataka
Email id: This email address is being protected from spambots. You need JavaScript enabled to view it.
Click
2 Dr. D V Gopalappa
Professor, Department of Economics & Chairman DOS in Economics and Cooperation
University of Mysore
Manasagangothri, Mysore - 570 006
Karnataka
Email: This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it.
Click
3 Prof. M. R. GANGADHAR
Chairman, Department of Studies in Anthropology
Board of Studies in Anthropology
Board of Examination in Anthropology
University of Mysore
Manasagangotri, Mysore-570006
Karnataka
E-mail: This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it.
Click
4 Dr.Thambanda Poonacha Vijay
Professor , Department of History
Kannada University
Hampi, Vidyaranya, Hospet
Bellary District Karnataka -583 276
Email id: This email address is being protected from spambots. You need JavaScript enabled to view it.
Click
5 Dr.Poornananda D S
Professor, Development of Journalism and Mass Communication
Kuvempu University Jnanasahyadri
Shankaraghatta- 577451. shimoga Dist.
Karnataka
Email id: This email address is being protected from spambots. You need JavaScript enabled to view it. Communication
Click
6 Dr.Kiran.M Gajanur
Assistant Professor, Department of Public Administration
Central University Of Karnataka
Kadaganchi P.O, Aland Road, Gulbarga Dist, Karnataka 585367
Email id: This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it.
Click
7 Dr.Praveena T L
Assistant Professor , Dept. of Studies in Political Science
Davanagere University
Shivagangotri, Davanagere-577007
Karnataka
Email id: This email address is being protected from spambots. You need JavaScript enabled to view it.
Click
8 Dr.vagishwari SP
Professor Department of Social Science and Historya
Christ University, Bangalore
Karnataka
Email id: This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it.
Click