ಪ್ರಚಾರೋಪನ್ಯಾಸ ಮಾಲೆ
ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ವಿವಿಧ ಪ್ರದೇಶಗಳನ್ನು ಒಂದುಗೂಡಿಸುವ ಪ್ರಯತ್ನ ನಿರಂತರವಾಗಿ ಹಳೆಯ ಮೈಸೂರು ಮತ್ತು ಉತ್ತರ ಕರ್ನಾಟಕದಲ್ಲಿ ಬಹಳ ಕಾಲದಿಂದ ನಡೆಯುತ್ತಲೇ ಇತ್ತು. ಅನಂತರ ಕನ್ನಡ ಅಭಿವೃದ್ಧಿ ಮತ್ತು ಕನ್ನಡಿಗರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳು ರೂಪಿತವಾದವು. ಕನ್ನಡದ ನೆಲ, ಜಲ, ಜನಗಳ ರಕ್ಷಣೆಗಾಗಿ ಹಲವಾರು ಸಂಸ್ಥೆಗಳು ಕೆಲಸ ಮಾಡತೊಡಗಿದವು. ಇದು ಕನ್ನಡ ನೆಲದ ಜನರನ್ನು ಭಾವನಾತ್ಮಕವಾಗಿ ಬೆಸೆಯತೊಡಗಿತು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೈಸೂರು ವಿಶ್ವವಿದ್ಯಾನಿಲಯ, ಕನ್ನಡ ನುಡಿಯ ಬೆಳೆವಣಿಗೆಗೆ ಹಿಂದೆಂದೂ ಕಾಣದ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರಮಿಸತೊಡಗಿದವು. ಅದರಂತೆ ಪ್ರಸಾರಾಂಗ ಜನಮಾನಸದಲ್ಲಿ ದೀಪ ಬೆಳಗಬೇಕು ಎಂಬ ನಿಲುವಿನೊಂದಿಗೆ ಸ್ಥಾಪನೆಯಾಯಿತು.
ಈ ಹಿನ್ನೆಲೆಯಲ್ಲಿ ಕುಲಾಧಿಪತಿಗಳ ಸೂಚನೆಗಳನ್ನು ಮೆಲುಕು ಹಾಕುತ್ತಾ ಅಧ್ಯಾಪಕ ಸಂಘವು ಹೀಗೆ ಆಲೋಚಿಸಿತು “ನಿಜವಾದ ವಿಶ್ವವಿದ್ಯಾನಿಲಯವು ದೇಶದಲ್ಲಿ ಸಂಸ್ಕೃತಿಯ ಕೇಂದ್ರವಾಗಬೇಕು. ಜನರ ಮನೆ ಬಾಗಿಲಿಗೆ ಅದನ್ನು ಮುಟ್ಟಿಸುವ ವಾಹಿನಿಯೂ ಆಗಬೇಕು. ತಾನೂ ಅಲ್ಲಿಂದ ಜೀವನರಸವನ್ನು ಹೀರಿ ಪುಷ್ಟಿಗೊಳ್ಳಬೇಕು. ಇಲ್ಲದಿದ್ದರೆ ಅದು ಮಡಿಯುಟ್ಟವರಂತೆ ಎಲ್ಲೋ ದೂರದಲ್ಲಿ ನಿಂತು ಜನಜೀವನದಿಂದ ಚೈತನ್ಯವನ್ನು ಉಕ್ಕಿಸಿಕೊಳ್ಳದೆ ಶುಷ್ಕವಾಗುತ್ತದೆ. ಅದನ್ನು ಬಿಟ್ಟು ಜನತೆಯ ಬಳಿಗೆ ನಡೆದರೆ ಮಾತ್ರ, ನಮ್ಮ ದೇಶದಲ್ಲಿ ವಿದ್ವಾಂಸರಿಗೂ ಜನತೆಗೂ ಇರತಕ್ಕ ದೃಷ್ಟಿ ವ್ಯತ್ಯಾಸವು ಕಡಿಮೆಯಾಗಿ ಅವರಿಬ್ಬರಿಗೆ ಹೆಚ್ಚು ಕಡಿಮೆ ಎಲ್ಲ ಅಂಶಗಳಲ್ಲಿಯೂ ಇರತಕ್ಕ ಅಂತರವು ತಗ್ಗಬಹುದು. ಈ ರೀತಿಯ ಜ್ಞಾನ ಸಮನ್ವಯತೆಯನ್ನು ವಿಶ್ವವಿದ್ಯಾನಿಲಯವು ಕೈಗೊಂಡು ದೇಶಕ್ಕೆ ತಾನೊಂದು ಹೊರೆಯಲ್ಲ. ಜನಜೀವನದಲ್ಲಿ ತನಗೂ ಒಂದು ಸ್ಥಾನವೂ, ಕರ್ತವ್ಯವೂ ಉಂಟು ಎಂಬುದನ್ನು ವ್ಯಕ್ತಪಡಿಸಬೇಕಾಗಿದೆ”. ಇಂತಹ ಆಲೋಚನೆಗಳು ಒಮ್ಮಿಂದೊಮ್ಮೆಲೆ ಮೂಡಿದವುಗಳಲ್ಲ ಅದರ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿ ಕಾರ್ಯಮಾಡಿತ್ತು. ಇವರ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರು ರಾತ್ರಿವೇಳೆಯಲ್ಲಿ ಗ್ರಾಮೀಣಭಾಗದ ವಯಸ್ಕರಿಗಾಗಿ ಶಿಕ್ಷಣ ಯೋಜನೆಯನ್ನು ಜಾರಿಗೆ ತಂದಿದ್ದರು. ಹಿಂದಿನಿಂದಲೂ ವಿಶ್ವವಿದ್ಯಾನಿಲಯದವರು ‘ಎಕ್ಸೆಟೆನ್‍ಷನ್’ ಉಪನ್ಯಾಸಗಳನ್ನು ನಡೆಸಿಕೊಂಡು ಬಂದಿದ್ದರು. ಅವುಗಳ ಉಪಯೋಗ ಕೇವಲ ವಿದ್ಯಾರ್ಥಿ ಮತ್ತು ಅಧ್ಯಾಪಕರಗಳ ಮಟ್ಟದಲ್ಲಿಯೇ ಸಾಗುತ್ತಿತ್ತು. ಇಂಥ ಉಪನ್ಯಾಸಗಳಿಂದ ಜನಕೋಟಿಗೆ ಪ್ರಯೋಜನ ಆಗಲಾರದು ಅದಕ್ಕಾಗಿ ಬೇರೆ ವಿಧಾನಗಳನ್ನು ಅನುಸರಿಸಿದರೆ ಒಳಿತೆಂದು ಭಾವಿಸಿದ ಅಧ್ಯಾಪಕ ಸಂಘವು ಒಂದು ‘ಉಪಸಮಿತಿಯನ್ನೇ ಪ್ರತ್ಯೇಕವಾಗಿ ಏರ್ಪಡಿಸಿ ಅಲ್ಲಿಂದ ಬಂದ ಸಲಹೆಗಳನ್ನು ಅಂಗೀಕರಿಸಿತು’. ಈ ಕಾರ್ಯವನ್ನು ನಡೆಸುವುದಕ್ಕೆ ವಿಶ್ವವಿದ್ಯಾನಿಲಯದ ಅಧ್ಯಾಪಕರೆ ಟೊಂಕ ಕಟ್ಟಿ ನಿಲ್ಲಬೇಕು. ನಗರಗಳನ್ನು ಬಿಟ್ಟು ದೇಶದ ಒಳಭಾಗಗಳಲ್ಲಿ ಸಂಚರಿಸಬೇಕು. ಕೆಲವರಿಗೆ ಮಾತ್ರ ಅರ್ಥವಾಗುವ ಇಂಗ್ಲಿಷನ್ನು ಬಿಟ್ಟು, ವಿದ್ಯಾವಂತರು, ಅಲ್ಪಜ್ಞರು, ಹೆಂಗಸರು, ಮಕ್ಕಳು ಎಲ್ಲರಿಗೂ ಅರ್ಥವಾಗುವ ಕನ್ನಡದಲ್ಲೇ ಉಪನ್ಯಾಸಗಳನ್ನು ಕೊಡಬೇಕು. ವಿಷಯವು ಪ್ರೌಢವಾದರೂ ಅದರ ನಿರೂಪಣೆ ಜನಸಾಮಾನ್ಯರಿಗೆ ರುಚಿಸುವಂತಿರಬೇಕು. ಅದರ ಭಾಷೆ ಸರಳವಾಗಿ ಮಕ್ಕಳಿಗೂ ತಿಳಿಯುವಂತಿರಬೇಕು. ವಿವಿಧ ವಿಷಯಗಳ ಮೇಲೆ ಅರ್ಥಗರ್ಭಿತವೂ ಮನೋರಂಜಕವೂ ಆದ ಉಪನ್ಯಾಸಗಳನ್ನು ಕೊಡಬೇಕು ಇದರಿಂದ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ವ್ಯಾಸಂಗದ ಸ್ವರೂಪವೇನು? ಅದರ ದೃಷ್ಟಿ ವಿಶೇಷವೇನು ಎಂಬುದರ ಅರಿವು ಆ ಸ್ಥಳದ ಪ್ರಜೆಗಳಿಗೆ ತಕ್ಕ ಮಟ್ಟಿಗೆ ಬಂದಂತಾಗುತ್ತದೆ. ಅವರಿಗೂ ಉಪನ್ಯಾಸಕರಿಗೂ ಪರಸ್ಪರ ಪರಿಚಯ ವಿಶ್ವಾಸಗಳು ಹುಟ್ಟುತ್ತವೆ”. ಇದರಿಂದಾಗಿ ಈ ಕಾರ್ಯದ ಮುಖ್ಯ ಉದ್ದೇಶವು ಫಲಿಸುವುದಕ್ಕೆ ಅವಕಾಶವಾಗುತ್ತದೆ ಎಂದು ಆಲೋಚಿಸಿದ ಅಧ್ಯಾಪಕ ಸಂಘವು 22-ಮೇ-1933ರಲ್ಲಿ ಪ್ರಥಮ ಉಪನ್ಯಾಸವನ್ನು ಏರ್ಪಡಿಸಿತು. ಇದೇ ಮುಂದಿನ ಎಲ್ಲ ಉಪನ್ಯಾಸಗಳಿಗೂ ದಾರಿದೀಪವೂ ಆಯಿತು.
ಕ್ರಮ ಸಂಖ್ಯೆ | ದಿನಾಂಕ | ಉಪನ್ಯಾಸಕರ ಹೆಸರು, ವಿಳಾಸ ಮತ್ತು ಸಂಕ್ಷಿಪ್ತ ಪರಿಚಯ | ಉಪನ್ಯಾಸದ ವಿಷಯ | ದತ್ತಿಯ ಹೆಸರು |
---|---|---|---|---|
2015-16ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ | ||||
1 | 29-02-2016 | ಈಚನೂರು ಕುಮಾರ ಸಾಹಿತಿಗಳು ಮೈಸೂರು |
ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ | ಪ್ರಚಾರೋಪನ್ಯಾಸ ಮಾಲೆ |
2 | 09-03-2016 | ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ ಕನ್ನಡ ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು |
ಶಾಸನತಜ್ಞ ಬಿ.ಎಲ್. ರೈಸ್ | - |
3 | 15-03-2016 | ಡಾ. ಟಿ. ಗೋವಿಂದರಾಜು ನಿವೃತ್ತ ಪ್ರಾಂಶುಪಾಲರು ಹಾಗೂ ಖ್ಯಾತ ಜಾನಪದ ತಜ್ಞರು ನಂ.765, 4ನೇ ಮುಖ್ಯರಸ್ತೆ ಕಿರ್ಲೋಸ್ಕರ್ ಬಡಾವಣೆ, ಬೆಂಗಳೂರು-73 ಮೊ.ನಂ.9731453919 |
ಜಾನಪದ ಸಂಶೋಧನೆಯ ಹೊಸ ಸಾಧ್ಯತೆಗಳು | - |
4 | 22-03-2016 | ಪ್ರೊ. ಸಿ.ಪಿ. ಸಿದ್ಧಾಶ್ರಮ ಪ್ರಾಧ್ಯಾಪಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈಸೂರು |
ಅಂಬಿಗರ ಚೌಡಯ್ಯ | - |
5 | 23-03-2016 | ಪ್ರೊ. ಜಿ.ಆರ್. ತಿಪ್ಪೇಸ್ವಾಮಿ ಪ್ರಾಧ್ಯಾಪಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈಸೂರು |
ಆಧುನಿಕ ಕಾವ್ಯ ಮತ್ತು ಜಾನಪದ | - |
2016-17ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ | ||||
6 | 14-11-2016 | ಡಾ. ಎನ್.ಕೆ. ರಾಮಶೇಷನ್ ನಿವೃತ್ತ ಪ್ರಾಂಶುಪಾಲರು ಮೈಸೂರು-06 |
ಟಿ.ಪಿ. ಕೈಲಾಸಂ | ಪ್ರಚಾರೋಪನ್ಯಾಸ ಮಾಲೆ |
7 | 21-11-2016 | ಪ್ರೊ. ಎಂ.ಜಿ. ಬಸವರಾಜ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾನಿಲಯ ಮೈಸೂರು |
ಕೌಟಿಲ್ಯನ ಅರ್ಥಶಾಸ್ತ್ರ | - |
8 | 09-12-2016 | ಶ್ರೀ ಸೀತಾರಾಮ್ ಜಾಗೀರದಾರ ಹಿರಿಯ ವಿದ್ವಾಂಸರು ಮತ್ತು ಶಾಸನ ತಜ್ಞರು ಮೈಸೂರು ವಿಶ್ವವಿದ್ಯಾನಿಲಯ ಮೊ.ನಂ.9535139516 |
ವಡ್ಡಾರಾಧನೆ | - |
9 | 01-12-2016 | ಶ್ರೀ ಎಂ.ಎನ್. ಪ್ರಭಾಕರ್ ಸುಪ್ರಸಿದ್ದ ವಿದ್ವಾಂಸರು |
ದೇವಾಲಯ ವಾಸ್ತುಶಿಲ್ಪ | - |
10 | 01-12-2016 | ಪ್ರೊ. ಎಂ.ಜಿ. ಮಂಜುನಾಥ ನಿರ್ದೇಶಕರು ಪ್ರಸಾರಾಂಗ, ಮೈವಿವಿ ಮಾನಸಗಂಗೋತ್ರಿ, ಮೈಸೂರು |
ಕನ್ನಡ ಲಿಪಿವಿಕಾಸದ ಹಂತಗಳು | - |
11 | 31-01-2017 | ಪ್ರೊ. ನರಸಿಂಹೇಗೌಡ ನಿವೃತ್ತ ಪ್ರಾಧ್ಯಾಪಕರು |
ರಾಮದಂಡು | - |
12 | 03-02-2017 | ಡಾ. ಜಿ. ಕೃಷ್ಣಪ್ಪ #22, ಗುರುದತ್ತ ನಿಲಯ 1ನೇ ಅಡ್ಡರಸ್ತೆ, ನೇತಾಜಿ ನಗರ ಮತ್ತಿಕೆರೆ, ಬೆಂಗಳೂರು-54 ಮೊ.ನಂ.9972109209 |
ಬೇಂದ್ರೆಯವರ ಕಾವ್ಯದ ವೈಶಿಷ್ಟ್ಯಗಳು | - |
13 | 08-02-2017 | ಪ್ರೊ. ಎ.ವಿ. ನಾವಡ ವಿಶ್ರಾಂತ ಪ್ರಾಧ್ಯಾಪಕರು #301,ಅಡೋಬ್ ಅಪಾರ್ಟ್‍ಮೆಂಟ್, ಕಲ್ಪನಾ ರೋಡ್, ವಸ್ಲಾನಿ ಮಂಗಳೂರು |
ಫರ್ಡಿನಾಂಡ್ ಕಿಟೆಲ್ ಬದುಕು-ಬರಹ | - |
14 | 09-02-2017 | ಶ್ರೀ ಸ್ನೇಕ್ ಶ್ಯಾಮ್ ಉರುಗ ತಜ್ಞರು ಮೈಸೂರು |
ಹಾವುಗಳು | - |
15 | 10-02-2017 | ಪ್ರೊ. ಎಸ್.ಆರ್. ಮಾಧುರಾವ್ ನಿವೃತ್ತ ಮುಖ್ಯಸ್ಥರು, ಗಣಿತ ವಿಭಾಗ, ಜೆಎಸ್‍ಎಸ್ ಕಾಲೇಜು ಮೈಸೂರು |
ಹತ್ತು ವಿಜ್ಞಾನ ಪ್ರಸಂಗಗಳು | - |
16 | 10-02-2017 | ಶ್ರೀಮತಿ ಭಾರತಿ ಕಾಸರಗೋಡು ಫ್ಲಾಟ್ ನಂ.802, ಬ್ಲಾಕ್ ರೂಬಿ-2, ಅಲ್ಫೈನ್ ರಿಜೆನ್ಸಿ, 10ನೇ ಡಿ ಮೇನ್, 1ನೇ ಬ್ಲಾಕ್, ಜಯನಗರ, ಬೆಂಗಳೂರು-11 |
ಸಮೇತನಹಳ್ಳಿ ರಾಮರಾವ್ : ಬದುಕು-ಬರಹ | - |
17 | 04-03-2017 | ಪ್ರೊ. ಸಿ. ವೀರಣ್ಣ #1541, ಸಿರಿಗಂಧ, 16ನೇ ಮೇನ್, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-40 ಮೊ.ನಂ.9448119060 |
ವಚನಕಾರರು ಮತ್ತು ಅಂಬೇಡ್ಕರ್ | - |
18 | 08-03-2017 | ಶ್ರೀಮತಿ ಮಂಜುಳಾ ಮಾನಸ ಮಾಜಿ ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ |
ಮಹಿಳಾ ಸಬಲೀಕರಣ | - |
19 | 09-03-2017 | ಪ್ರೊ. ಎನ್.ಎಸ್. ತಾರಾನಾಥ್ ಖ್ಯಾತ ವಿದ್ವಾಂಸರು ಮೈಸೂರು ವಿಶ್ವವಿದ್ಯಾನಿಲಯ |
ಕೇಶೀರಾಜ | - |
2019-20ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ | ||||
20 | 13-11-2019 | ಡಾ. ನಂಜಯ್ಯ ಹೊಂಗನೂರು ಸಹ ಪ್ರಾಧ್ಯಾಪಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈಸೂರು ಮೊ.ನಂ. 9900785982 |
ಮೈಸೂರು ವಿಶ್ವವಿದ್ಯಾನಿಲಯ ಮತ್ತು ಜಾನಪದ ಅಧ್ಯಯನ | ಪ್ರಚಾರೋಪನ್ಯಾಸ ಮಾಲೆ |
21 | 20-11-2019 | ಶ್ರೀಮತಿ ಗಿರಿಜಾ ಲೋಕೇಶ್ #43, ಶಬರಿ, ಬಿ.ಎಸ್.ಕೆ. 3ನೇ ಹಂತ ಬೆಂಗಳೂರು-85 ಮೊ.ನಂ.9900144313 |
ಧೀಮಂತ ನಟ ಶ್ರೀ ಸುಬ್ಬಯ್ಯ ನಾಯ್ಡು ಅವರ ಜೀವನ ಮತ್ತು ಸಾಧನೆ | - |
22 | 28-11-2019 | ಶ್ರೀ ವೇಮಗಲ್ ಸೋಮಶೇಖರ್ #160, ದೀಪ 4ನೇ ಅಡ್ಡರಸ್ತೆ, ಲಕ್ಷ್ಮೀಪುರ ಕೆಂಪೇಗೌಡ ನಗರ, ಬೆಂಗಳೂರು-19 ಮೊ.ನಂ.9901562292 |
ಗಾಂಧೀಜಿ ಮತ್ತು ಯುವಶಕ್ತಿ | - |
23 | 02-12-2019 | ಪ್ರೊ. ಎಂ.ಜಿ. ಬಸವರಾಜು #223, ಪ್ರಭುದೇವ ನಿಲಯ 12ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ ಸರಸ್ವತಿಪುರಂ, ಮೈಸೂರು-09 |
ಗಾಂಧಿ-ಕುಮಾರಪ್ಪನವರ ಶಾಶ್ವತ ಅರ್ಥಶಾಸ್ತ್ರ | - |
24 | 02-12-2019 | ಡಾ. ಸಿ.ಪಿ. ರಾಮಶೇಷ #1212, ಅಶೋಕ ವೃತ್ತ ಕಾಂತರಾಜೇ ಅರಸ್ ರಸ್ತೆ ಚಾಮರಾಜಪುರಂ, ಮೈಸೂರು-05 |
ಗೃಹ ಪುಸ್ತಕ ಭಂಡಾರ | - |
25 | 11-12-2019 | ಡಾ. ಪಿ.ಕೆ. ರಾಜಶೇಖರ್ ವಿಶ್ರಾಂತ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾನಿಲಯ |
ಜನಪದ ಮಹಾಕಾವ್ಯ ಮಲೆಯ ಮಹದೇಶ್ವರ | - |
26 | 21-12-2019 | ಶ್ರೀ ಸುರೇಶ್ ಮೂನ ಮತ್ತು ತಂಡ #131, 4ನೇ ಕ್ರಾಸ್ ನೆಹರು ರಸ್ತೆ, ಗಿರಿನಗರ 1ನೇ ಫೇಸ್ ಬೆಂಗಳೂರು-85 ಮೊ.ನಂ.9342539221 |
ನಟಭಯಂಕರ ಗಂಗಾಧರರಾವರ ಜೀವನ ಮತ್ತು ಸಾಧನೆ | - |
27 | 27-12-2019 | ಡಾ. ಟಿ.ಎಲ್. ಜಗದೀಶ್ ಸಹಾಯಕ ಪ್ರಾಧ್ಯಾಪಕರು ಮಹಾರಾಣಿ ಕಾಲೇಜು ಮೈಸೂರು ಮೊ.ನಂ.7975844217 |
ಮೈಸೂರಿನ ಸಾಂಸ್ಕøತಿಕ ಇತಿಹಾಸ” | - |
28 | 27-12-2019 | ಡಾ. ಎಂ.ಬಿ. ಸುರೇಶ್ ಸಹಾಯಕ ಪ್ರಾಧ್ಯಾಪಕರು ಮಹಾರಾಜ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯ ಮೊ.ನಂ.8618563803 |
ಎಂ.ಎಲ್. ಶ್ರೀಕಂಠೇಗೌಡರ ಜೀವನ ಮತ್ತು ಸಾಧನೆ | - |
29 | 30-12-2019 | ಡಾ. ಜಿ. ಕೃಷ್ಣಪ್ಪ #22, ಗುರುದತ್ತ ನಿಲಯ 1ನೇ ಅಡ್ಡರಸ್ತೆ, ನೇತಾಜಿ ನಗರ ಮತ್ತಿಕೆರೆ, ಬೆಂಗಳೂರು-54 ಮೊ.ನಂ.9972109209 |
ಶ್ರೀ ರಾಮಾಯಣ ದರ್ಶನಂ ಯುಗಧರ್ಮದ ಪ್ರದೀಪಿಕೆ | - |
30 | 03-01-2020 | ಡಾ. ಎ. ರಂಗಸ್ವಾಮಿ ಮುಖ್ಯಸ್ಥರು ಕನ್ನಡ ವಿಭಾಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ |
ಚಾವುಂಡರಾಯನ ಲೋಕೋಪಕಾರ | - |
31 | 03-01-2020 | ಡಾ. ಬಿ.ಎಸ್. ಅನಿಲಕುಮಾರ ಸಹಾಯಕ ನಿರ್ದೇಶಕರು ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ ಮೊ.ನಂ.9902400588 |
ಹರಿದಾಸ ಸಾಹಿತ್ಯ-ಮನೋವಿಜ್ಞಾನ | - |
32 | 22-01-2020 | ಡಾ. ರಾಥೋಡ್ ಸಹಾಯಕ ಪ್ರಾಧ್ಯಾಪಕರು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಮೊ.ನಂ.9449468473 |
ಕೈಫಿಯತ್ತುಗಳು | - |
33 | 22-01-2020 | ಡಾ. ಎನ್.ಕೆ. ರಾಮಶೇಷನ್ ನಿವೃತ್ತ ಪ್ರಾಂಶುಪಾಲರು ಮೈಸೂರು-06 ಮೊ.ನಂ.8277146110 |
ಶ್ರೀ ವಾದಿರಾಜರು | - |
34 | 28-01-2020 | ಶ್ರೀ ಎನ್. ಧನಂಜಯ ರಂಗಕರ್ಮಿ ಹಾಗೂ ಉಪನ್ಯಾಸಕರು ಶಾರದ ವಿದ್ಯಾಮಂದಿರ ಕಾಲೇಜು ಮೈಸೂರು ಮೊ.ನಂ.9916617054 |
ವೃತ್ತಿರಂಗದ ಮಹಾನ್ ನಟ ಶ್ರೀ ಮಹಮದ್ ಪೀರ್ ಸಾಹೇಬರು:ಜೀವನ ಮತ್ತು ಸಾಧನೆ” | - |
35 | 30-01-2020 | ಡಾ. ಎಂ.ಎಸ್. ಬಸವರಾಜ್ ವೈದ್ಯಾಧಿಕಾರಿಗಳು ಆರೋಗ್ಯಕೇಂದ್ರ, ಮೈವಿವಿ ಮೈಸೂರು |
ಯುವಜನತೆಯಲ್ಲಿ ಹೊಸದಾಗಿ ಉದ್ಭವಿಸುತ್ತಿರುವ ಖಾಯಿಲೆಗಳು | - |
36 | 01-02-2020 | ಡಾ. ಕ್ರಿಸ್ಟೀನ ಕಾಂತರಾಜ್ ಸಮಾಲೋಚಕರು ಆಡಳಿತ ತರಬೇತಿ ಸಂಸ್ಥೆ ಮೈಸೂರು ಮೊ.ನಂ.9448038626 |
ಲಿಂಗತ್ವ ಸಂವೇದನೆ | - |
37 | 10-02-2020 | ಶ್ರೀಮತಿ ಭಾರತೀ ಕಾಸರಗೋಡು #ಕೆ 1003, ಪೂರ್ವ ಐಲ್ಯಾಂಡ್, 9ನೇ ಮೈಲ್ ರಸ್ತೆ, ಕನಕಪುರ ರಸ್ತೆ ಎದುರು, ಮಲ್ಲಸಂದ್ರ, ಹಾಲಿಡೇ ವಿಲೇಜ್ ರೆಸಾರ್ಟ್ ಹತ್ತಿರ, ಬೆಂಗಳೂರು-62 |
ನಾದೋಪಾಸಕ ಡಾ.ಮೈಸೂರು ವಿ ದೊರೆಸ್ವಾಮಿ ಅಯ್ಯಂಗಾರ್ | - |
38 | 10-02-2020 | ಡಾ. ಕೆ. ಕುಮಾರ್ ಸಹ ಪ್ರಾಧ್ಯಾಪಕರು ಲಲಿತಕಲಾ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು |
ಭರತನಾಟ್ಯ ಶೈಲಿಗಳು | - |
39 | 10-02-2020 | ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಕುಲಪತಿಗಳು(ಪ್ರಭಾರ) ಕೆ.ಎಸ್.ಜಿ.ಎಚ್. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ., ಮೈಸೂರು |
ರಂಗಭೂಮಿ ಮತ್ತು ಸಾಮಾಜಿಕ ಚಳವಳಿಗಳು | - |
40 | 12-02-2020 | ಶ್ರೀ ಸೀತಾರಾಮ್ ಜಾಗೀರದಾರ ಹಿರಿಯ ವಿದ್ವಾಂಸರು ಮತ್ತು ಶಾಸನ ತಜ್ಞರು ಮೈಸೂರು ವಿಶ್ವವಿದ್ಯಾನಿಲಯ ಮೊ.ನಂ.9535139516 |
ಪುಣ್ಯಾಸ್ರವ | - |
41 | 12-02-2020 | ಶ್ರೀ ಎಂ.ಎನ್. ಪ್ರಭಾಕರ್ ಹಿರಿಯ ವಿದ್ವಾಂಸರು #42, ಬ್ಲಾಕ್ 17, ಬ್ಯಾಂಕ್ ಕಾಲೋನಿ ಶ್ರೀರಾಂಪುರ 2ನೇ ಹಂತ, ಮೈಸೂರು-34 ಮೊ.ನಂ.9845491545 |
ಸೋಮನಾಥಪುರದ ಕೇಶವ ದೇವಾಲಯ | - |
42 | 12-02-2020 | ಪ್ರೊ. ಜಿ.ಆರ್. ಜನಾರ್ಧನ್ ಪ್ರಾಧ್ಯಾಪಕರು ಸಸ್ಯಶಾಸ್ತ್ರ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ ಮೊ.ನಂ.9845636998 |
ಸಸ್ಯರೋಗಗಳು ಮತ್ತು ನಿರ್ವಹಣೆ | - |
43 | 14-02-2020 | ಪ್ರೊ. ಕೃಷ್ಣಮೂರ್ತಿ ಹನೂರು ವಿಶ್ರಾಂತ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾನಿಲಯ ಮೊ.ನಂ.9901313766 |
ಕುಮಾರವ್ಯಾಸ ಅಧ್ಯಯನ ಪರಂಪರೆ | - |
44 | 14-02-2020 | ಡಾ. ಕೆಳದಿ ವೆಂಕಟೇಶ್ ಜೋಯೀಸ್ ಕ್ಯುರೇಟರ್ ಕೆಳದಿ ವಸ್ತು ಸಂಗ್ರಹಾಲಯ ಕುವೆಂಪು ವಿ.ವಿ ಮೊ.ನಂ.9448839739 |
ಕೆಳದಿ ಅರಸರು | - |
45 | 14-02-2020 | ಪ್ರೊ. ಸಾತನೂರು ದೇವರಾಜ ಗೌರವ ವಿಜ್ಞಾನ ಸಂಪಾದಕರು ಕನ್ನಡ ವಿಶ್ವಕೋಶ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ ಮೊ.ನಂ.9880640534 |
ಅನುದಿನವೂ ವಿಜ್ಞಾನ | - |
46 | 15-02-2020 | ಡಾ. ಮಂಗಳಾ ಪ್ರಿಯದರ್ಶಿನಿ #135 ಎ, ವೈಷ್ಣವಿ 1ನೇ ಮೇನ್ ಮತ್ತು ಬ್ಲಾಕ್, ನಾಗರಬಾವಿ 2ನೇ ಹಂತ, ಬೆಂಗಳೂರು-72 ಮೊ.ನಂ.9845325428 |
ನವೋದಯ ಕಾವ್ಯದಲ್ಲಿ ಅನುಭಾವ | - |