ನಿಯತಕಾಲಿಕೆಗಳು
ಪ್ರಸಾರಾಂಗವು ಒಟ್ಟು ಐದು ನಿಯತಕಾಲಿಕೆಗಳನ್ನು ಹೊರತರುತ್ತಿದೆ. ಅವುಗಳಲ್ಲಿ ತ್ರೈಮಾಸಿಕಗಳಾದ ಪ್ರಬುದ್ಧ ಕರ್ಣಾಟಕ, ವಿಜ್ಞಾನ ಕರ್ಣಾಟಕ, ಮಾನವಿಕ ಕರ್ಣಾಟಕ ಮತ್ತು ಅರ್ಧವಾರ್ಷಿಕಗಳಾದ (ಇಂಗ್ಲಿಷ್‍ನಲ್ಲಿ) ಮೈಸೈನ್ಸ್ ಹಾಗೂ ಮೈಸೊಸೈಟಿ.
ಮೈ ಸೈನ್ಸ್ (my SCIENCE)
ಇದು ಪ್ರಸಾರಾಂಗದಿಂದ ಪ್ರಕಟವಾಗುವ ಅರ್ಧವಾರ್ಷಿಕದ ನಿಯತಕಾಲಿಕೆ. ವಿಜ್ಞಾನ ವಿಷಯಗಳನ್ನು ಕುರಿತ ಸಂಶೋಧನಾತ್ಮಕ ಪತ್ರಿಕೆ. ಇದರ ಮುಖ್ಯ ಉದ್ದೇಶ ವಿಜ್ಞಾನದ ವಿವಿಧ ವಿಭಾಗಗಳ ಹೊಸ ಸಂಶೋಧನೆಯನ್ನು ಹೊರತರುವುದಾಗಿದೆ. 1/4 ಕ್ರೌನ್ ಅಳತೆಯಲ್ಲಿ ಮುದ್ರಿತವಾಗುವ ಈ ಪತ್ರಿಕೆಯನ್ನು 2005ರಲ್ಲಿ ‘Journal of Univesity of Mysore Section-‘A’ for Arts and section ‘B’ for Science’ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ಇತ್ತೀಚೆಗೆ ಹೊಸ ಬದಲಾವಣೆಯೊಂದಿಗೆ ಪ್ರತ್ಯೇಕ ಹೆಸರನ್ನಿಟ್ಟ ‘myScience’ ಶೀರ್ಷಿಕೆಯಲ್ಲಿ ಪ್ರಕಟಿಸಲಾಗುತ್ತಿದೆ. 2005ರಲ್ಲಿ ಪತ್ರಿಕೆ ಆರಂಭವಾದಾಗ ಜನವರಿ, ಮೇ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿ ತ್ರೈಮಾಸಿಕವಾಗಿ ಹೊರತರಲಾಗುತ್ತಿತ್ತು. ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಹೆಚ್.ಎ.ರಂಗನಾಥ್, ಎ.ವಿ.ಗೋಪಾಲ್‍ರಾವ್, ಡಿ.ಚನ್ನೇಗೌಡ, ಕೆ.ಎ.ರವೀಶ, ಬಿ.ಎಸ್.ವಿಶ್ವನಾಥ ಮತ್ತು ಎಸ್.ರವಿ ಇದ್ದರು. 2010 ರಿಂದೀಚೆಗೆ ಪತ್ರಿಕೆಗೆ ಬರುತ್ತಿದ್ದ ಲೇಖನಗಳು ಕಡಿಮೆಯಾಗಿ, ಸಂಪಾದಕ ಮಂಡಳಿಯ ಬದಲಾವಣೆಯೂ ಆಗಿ ತ್ರೈಮಾಸಿಕವಾಗಿದ್ದ ಪತ್ರಿಕೆ ಅರ್ಥವಾರ್ಷಿಕವಾಗಿ ಪ್ರಕಟಗೊಳ್ಳುತ್ತಾ ವಿಜ್ಞಾನದ ಸಂಶೋಧನೆಗಳಿಗೆ ಮನ್ನಣೆ ನೀಡುತ್ತಿದೆ.
ಮೈಸೊಸೈಟಿ (mySOCIETY)- ISSN 2394-5982
ಈ ಮೇಲಿನಂತೆ ಇದು ಕೂಡ ಪ್ರಸಾರಾಂಗದಿಂದ ಪ್ರಕಟಗೊಳ್ಳುತ್ತಿರುವ ಅರ್ಧವಾರ್ಷಿಕ ನಿಯತಕಾಲಿಕೆ. 2006 ರಿಂದ ಪ್ರಾರಂಭವಾದ ಈ ನಿಯತಕಾಲಿಕೆಯ ಮೊದಲ ಸಂಪಾದಕರಾಗಿ ಆರ್. ಇಂದಿರಾ, ಸಮಾಜಶಾಸ್ತ್ರದ ಉಪನ್ಯಾಸಕಿ, ಮೈಸೂರು ವಿಶ್ವವಿದ್ಯಾನಿಲಯ ಅವರು ನೇಮಕವಾಗಿದ್ದರು. 2009ರಿಂದ ಮುಫರ್ ಅಸಾದಿ. ರಾಜ್ಯಶಾಸ್ತ್ರದ ಪ್ರಾಧ್ಯಾಪಕರು, ಮಾನಸಗಂಗೋತ್ರಿ ಮೈಸೂರು ಇವರನ್ನು ನೇಮಿಸಲಾಯಿತು. ಮೈಸೈನ್ಸ್ ಮತ್ತು ಮೈಆಟ್ಸ್ ಎರಡೂ ಪತ್ರಿಕೆಗಳು ಇಂಗ್ಲಿಷ್‍ನಲ್ಲಿ ಪ್ರಕಟವಾಗುತ್ತಿದ್ದ ನಿಯತಕಾಲಿಕೆಗಳು ಮೈಆಟ್ಸ್ ಅಥವಾ ಮೈಸೊಸೈಟಿಯು ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಮೊದಲಾದ ಮಾನವಿಕ ವಿಷಯಗಳ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸುತ್ತಿರುವ ನಿಯತಕಾಲಿಕೆಯಾಗಿದೆ.
ಹೀಗೆ ಪ್ರಸಾರಾಂಗವು ತನ್ನ ಮೌಲಿಕವಾದ ಮೂರು ತ್ರೈಮಾಸಿಕಗಳು ಹಾಗೂ ಎರಡು ಅರ್ಧವಾರ್ಷಿಕ ನಿಯತಕಾಲಿಕೆಗಳ ಮೂಲಕ ಕನ್ನಡ-ನಾಡು-ನುಡಿ, ಸಾಹಿತ್ಯ ಮತ್ತು ಜನತೆಯ ಆಶೋತ್ತರಗಳ ಏಳಿಗೆಯಲ್ಲಿ ತನ್ನನ್ನು ಒಳಗುಮಾಡಿಕೊಂಡು, ಸರ್ವವೂ ಸಂಪನ್ನವಾಗುವಂತೆ ಕ್ರಿಯಾಶೀಲವಾಗಿ ಕಾರ್ಯೋನ್ಮುಖವಾದುದರ ಜೊತೆಯಲ್ಲಿಯೆ ಕನ್ನಡ ನಾಡು-ನುಡಿಗೆ ತಮ್ಮನ್ನು ಅರ್ಪಣೆ ಮಾಡಿ-ಕೊಂಡಿರುವುದನ್ನು ಗುರುತಿಸಲಾಗಿದೆ.