• iconಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು-06
  • iconUniversity of Mysore, Manasagangotri, Mysuru-06

ಸುದ್ದಿ ಮತ್ತು ಘಟನೆಗಳು

ಪ್ರಬುದ್ಧ ಕರ್ಣಾಟಕ ಶತಮಾನೋತ್ಸವ, ಮಾನವಿಕ ಮತ್ತು ವಿಜ್ಞಾನ ಕರ್ಣಾಟಕ ಸುವರ್ಣ ಮಹೋತ್ಸವ ಆಚರಣೆಯ ವರ್ಷ - 2021

ಪ್ರಸ್ತಾವನೆ

ಜ್ಞಾನ ಪ್ರಸಾರದ ಸದುದ್ದೇಶದಿಂದ 22 ಮೇ 1933 ರಲ್ಲಿ ಸ್ಥಾಪನೆಯಾದ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯದ ಉತ್ತುಂಗ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದು . ಬೋಧನಾಂಗ , ಕಾರ್ಯಾಂಗಗಳ ಜೊತೆಗೆ ಪ್ರಸಾರಾಂಗವು ವಿಶ್ವವಿದ್ಯಾನಿಲಯದ ಆಧಾರ ಸ್ತಂಭವಾಗಿದೆ…

ಜ್ಞಾನ ಪ್ರಸರಣಕ್ಕೆ ಇಂಥದ್ದೆ ಒಂದು ಮಾಧ್ಯಮ ಸಾಕು ಎಂದು ಹೇಳುವಂತಿಲ್ಲ. ಜ್ಞಾನ ಎಲ್ಲೆಡೆ ಪಸರಿಸಬೇಕು, ಯಾವುದೇ ಒಂದು ವಿಶ್ವವಿದ್ಯಾನಿಲಯದ ಕೆಲಸ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಕಲಿಸುವುದಲ್ಲ. ಅದರ ಧ್ಯೇಯ ಹಳ್ಳಿಯ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಅದು ಸಾಫಲ್ಯತೆಯನ್ನು ಕಂಡುಕೊಳ್ಳುತ್ತದೆ. ಇದಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಜೀವನಾಡಿಯಾಗಿ, ಹೃದಯವಾಗಿ ‘ನಹಿ ಜ್ಞಾನೇನ ಸದೃಶಂ’ ಎಂಬ ಶಿರೋನಾಮೆಗೆ ಅರ್ಥ ಕಲ್ಪಿಸಲು ಜ್ಞಾನ ದಾಸೋಹವನ್ನು ಹಳ್ಳಿಯ ಮನೆಮನೆಗೂ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದ ಪ್ರಸಾರಾಂಗದ ಹುಟ್ಟನ್ನು ಮೊದಲ ಸೆನೆಟ್ ಸಭೆಯ ಭಾಷಣದಲ್ಲಿಯೇ ಗುರುತಿಸಬಹುದು. “ಕಾರಣಾಂತರಗಳಿಂದ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸಲು ಅಶಕ್ತರಾದ ಜನಸಾಮಾನ್ಯರಿಗೆ ವಿಶ್ವವಿದ್ಯೆಯ ಪರಿಚಯ ಮಾಡಿಕೊಡಲು ನಮ್ಮ ವಿಶ್ವವಿದ್ಯಾನಿಲಯ ಶ್ರಮಿಸಬೇಕು. ಈ ಕಾರ್ಯವು ಪ್ರಚಾರೋಪನ್ಯಾಸ ಮತ್ತು ಪ್ರಕಟಣೆಗಳ ಮೂಲಕ ನಡೆಯಬೇಕಾಗಿದೆ. ಅತ್ಯಂತ ಪ್ರಯೋಜನಕಾರಿಯಾದ ಈ ಮಹತ್ಕಾರ್ಯವನ್ನು ವಿಶ್ವವಿದ್ಯಾನಿಲಯವು ಬೇಗನೆ ಕಾರ್ಯರೂಪಕ್ಕೆ ತರುವುದೆಂದು ನಂಬಿದ್ದೇನೆ”ಎಂದು ಹೇಳಿದ ನಾಲ್ವಡಿ ಕೃಷ್ಣರಾಜ ಒಡೆಯರ ಮಾತುಗಳು ಪ್ರಸಾರಾಂಗಕ್ಕೆ ಅಸ್ತಿಭಾರ ಹಾಕಿದವು.

ಪ್ರಸಾರಾಂಗದ ಮುಖ್ಯ ಉದ್ದೇಶ ಗ್ರಂಥೋದ್ಯಮವಾಗಿ ಬೆಳೆವಣಿಗೆ ಹೊಂದುವದರೊಂದಿಗೆ ಕನ್ನಡದ ನಾಡು-ನುಡಿ ಸಾಹಿತ್ಯದ ಬೆಳೆವಣಿಗೆ ಶ್ರಮಿಸುವುದಾಗಿದೆ. ಗ್ರಂಥೋದ್ಯಮವೆಂದರೆ ಗ್ರಂಥಗಳ ರಚನೆ, ಪ್ರಕಾಶನ, ಮುದ್ರಣ ಮತ್ತು ಸಂಗ್ರಹ. ಈ ನಾಲ್ಕೂ ಅಂಶಗಳು ಪ್ರಸಾರಾಂಗದಲ್ಲಿ ಮೈತಳೆದಿವೆ. ಇವುಗಳ ಒಟ್ಟು ಮೊತ್ತವಾಗಿ ಪ್ರಸಾರಾಂಗ ಕಾರ್ಯನಿರ್ವಹಿಸುತ್ತಿದೆ ಎಂದರೆ ತಪ್ಪಾಗದು. ಕನ್ನಡ ನುಡಿಯ ಬೆಳೆವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ಣಾಟಕ ವಿದ್ಯಾವರ್ಧಕ ಸಂಘಗಳ ಸ್ಥಾಪನೆ ಹೊಸ ಬೆಳಕನ್ನೇ ಚೆಲ್ಲಿದವು. ಅದರಂತೆ ಪ್ರಸಾರಾಂಗ ಕೂಡ ಜನಮಾನಸದಲ್ಲಿ ಕನ್ನಡ ನುಡಿಯ ದೀಪ ಬೆಳಗಬೇಕು ಎಂಬ ನಿಲುವಿನೊಂದಿಗೆ ಕಾರ್ಯನಿರತವಾಗಿರುವುದು ಸ್ತುತ್ಯಾರ್ಹವಾದ ಅಂಶ. ಪ್ರತಿಯೊಬ್ಬ ಕವಿಯ ಪ್ರತಿಯೊಂದು ಕಾವ್ಯವನ್ನು ಪ್ರತಿಯೊಬ್ಬರು ಆಮೂಲಾಗ್ರವಾಗಿ ಓದುವುದು ಸಾಧ್ಯವಿಲ್ಲ. ಈಗ ವಿದ್ಯಾ ಪ್ರಾಚುರ್ಯ ವಿಶೇಷದಿಂದಲೂ ಮುದ್ರಣದ ಸೌಕರ್ಯದ ವಿಶೇಷದಿಂದಲೂ ಗ್ರಂಥ ಸಂಖ್ಯಾವೃದ್ಧಿಯು ಹೇರಳವಾಗಿ ಆಗುತ್ತಿದೆ. ಇಂಥ ಕಾಲದಲ್ಲಿ ಕಾವ್ಯರಾಶಿಯೊಳಗಿನ ಉತ್ತಮ ಕೃತಿಗಳ ಸಾರಾಂಶವನ್ನು ಸಂಗ್ರಹಿಸಿ ಜನರ ಮುಂದಿರಿಸಲು ಪ್ರಸಾರಾಂಗದ ಪುಸ್ತಕ ಮಾಲೆಗಳು ಸಹಕಾರಿಯಾಗಿವೆ. ನಿತ್ಯ ಪರಿವರ್ತನಶೀಲವಾದ ಜಗತ್ತಿನ ಮಾನವನ ಜ್ಞಾನವನ್ನು ವಿಕಾಸಗೊಳಿಸುತ್ತಾ, ಅರ್ಥಪೂರ್ಣ ಗ್ರಂಥಗಳ ಪ್ರಕಟಣೆಗಳ ಮೂಲಕ ಓದುಗನಿಗೆ ಒದಗಿಸುವ ಕಾರ್ಯವನ್ನು ಮಾಡುತ್ತಿದೆ.

ಕನ್ನಡ ಸಾಹಿತ್ಯದ ಬೆಳೆವಣಿಗೆಯಲ್ಲಿ ಪ್ರಸಾರಾಂಗ ಮತ್ತು ಅದರ ಪ್ರಮುಖ ನಿಯತಕಾಲಿಕೆಗಳಾದ ಪ್ರಬುದ್ಧ ಕರ್ಣಾಟಕ, ಮಾನವಿಕ ಕರ್ಣಾಟಕ, ವಿಜ್ಞಾನ ಕರ್ಣಾಟಕ ಮತ್ತು ಮೈಸೈನ್ಸ್ ಮತ್ತು ಮೈಸೊಸೈಟಿ ಇವುಗಳ ಕೊಡುಗೆ ಅನನ್ಯವಾದದು. ಕಲಿಕೆಗೆ ವಿಶ್ವವಿದ್ಯಾನಿಲಯಕ್ಕೆ ಬರಲು ಅವಕಾಶವಿಲ್ಲದವರ ಮನೆ ಬಾಗಿಲಿಗೆ ವಿಶ್ವವಿದ್ಯಾನಿಲಯವನ್ನೇ ಒಯ್ಯುತ್ತಿರುವ ಸಂಸ್ಥೆಯೇ ಪ್ರಸಾರಾಂಗ. ಈ ಹಿನ್ನೆಲೆಯಲ್ಲಿ ಪ್ರಸಾರಾಂಗವು 1933 ರಲ್ಲಿ ಸ್ಥಾಪನೆಯಾಯಿತು.

ಪ್ರಸಾರಾಂಗದಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರು

 

ಸುಬ್ಬರಾಯಾಚಾರ್

ತ. ಸು. ಶಾಮರಾಯ

 
ಪ್ರಸಾರಾಂಗದ ಕುರಿತು
About

ಜ್ಞಾನ ಪ್ರಸಾರದ ಸದುದ್ದೇಶದಿಂದ 22 ಮೇ 1933 ರಲ್ಲಿ ಸ್ಥಾಪನೆಯಾದ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯದ ಉತ್ತುಂಗ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದು. ಬೋಧನಾಂಗ, ಕಾರ್ಯಾಂಗಗಳ ಜೊತೆಗೆ ಪ್ರಸಾರಾಂಗವು ವಿಶ್ವವಿದ್ಯಾನಿಲಯದ ಆಧಾರ ಸ್ತಂಭವಾಗಿದೆ. ಜ್ಞಾನ ಪ್ರಸರಣಕ್ಕೆ ಇಂಥದ್ದೆ ಒಂದು ಮಾಧ್ಯಮ ಸಾಕು ಎಂದು ಹೇಳುವಂತಿಲ್ಲ. ಜ್ಞಾನ ಎಲ್ಲೆಡೆ ಪಸರಿಸಬೇಕು, ಯಾವುದೇ ಒಂದು ವಿಶ್ವವಿದ್ಯಾನಿಲಯದ ಕೆಲಸ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಕಲಿಸುವುದಲ್ಲ. ಅದರ ಧ್ಯೇಯ ಹಳ್ಳಿಯ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಅದು ಸಾಫಲ್ಯತೆಯನ್ನು ಕಂಡುಕೊಳ್ಳುತ್ತದೆ.

 

ಮತ್ತಷ್ಟು ಓದಿ

ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಥಾಪಕರು

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಪ್ರಸಾರಾಂಗದ ರೂವಾರಿಗಳು

ರಾಷ್ಟ್ರಕವಿ ಶ್ರೀ ಕುವೆಂಪುರವರು

ಶ್ರೀ ಜಿ. ಹನುಮಂತರಾಯರು

ದೇ.ಜವರೇಗೌಡರು

ಕುಲಪತಿಗಳ ಸಂದೇಶ
ಗೌರವಾನ್ವಿತ ಉಪಕುಲಪತಿಗಳು
lokanth
ಪ್ರೊ.ಲೋಕನಾಥ ಎನ್.ಕೆ

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ದೂರದರ್ಶಿತ್ವ ಮತ್ತು ಒತ್ತಾಸೆಯಿಂದ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಗೊಂಡು 105 ವಸಂತಗಳನ್ನು ಪೂರೈಸಿದೆ. ಉನ್ನತ ಶಿಕ್ಷಣ ಮತ್ತು ಅತ್ಯುತ್ತಮ ಜ್ಞಾನ ಸಂಪಾದನೆ ಎಲ್ಲರಿಗೂ ದೊರಕಲಿ ಎಂಬ ಆಶಯದಲ್ಲಿ ಮುನ್ನಡೆಯುತ್ತಾ ಬಂದಿರುವ ವಿಶ್ವವಿದ್ಯಾನಿಲಯವು ತನ್ನ ಕಾರ್ಯಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸುವ ಹಿನ್ನೆಲೆಯಲ್ಲಿ 1933ರಲ್ಲಿ ಪ್ರಸಾರಾಂಗವನ್ನು ಸ್ಥಾಪಿಸಿತು. ಪ್ರಸಾರಾಂಗವು ಕಳೆದ 88 ವರ್ಷಗಳಿಂದಲೂ ಪ್ರಚಾರೋಪನ್ಯಾಸ, ಪಠ್ಯಪುಸ್ತಕ ಮತ್ತು ವಿಷಯಾಧಾರಿತ ಪುಸ್ತಕಗಳ ಪ್ರಕಟಣೆಯ ಜವಾಬ್ದಾರಿಯನ್ನು ಹಲವು ಆಯಾಮಗಳಲ್ಲಿ ಮುನ್ನಡೆಸಿಕೊಂಡು ಬಂದಿದೆ. ಇದುವರೆಗೂ 2800ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದು ಒಂದು ಇತಿಹಾಸವೆಂದು ಭಾವಿಸಿದ್ದೇನೆ. ಪ್ರಬುದ್ಧ ಕರ್ಣಾಟಕ, ಮಾನವಿಕ ಕರ್ಣಾಟಕ ಮತ್ತು ವಿಜ್ಞಾನ ಕರ್ಣಾಟಕ ಎಂಬ ನಿಯತಕಾಲಿಕೆಗಳನ್ನು ಪ್ರಸಾರಾಂಗವು ಪ್ರಕಟಿಸುತ್ತಾ ಬಂದಿದ್ದು ಪ್ರಬುದ್ಧ ಕರ್ಣಾಟಕ ನೂರು ವರ್ಷ ಹಾಗೂ ಮಾನವಿಕ ಕರ್ಣಾಟಕ ಮತ್ತು ವಿಜ್ಞಾನ ಕರ್ಣಾಟಕ 50 ವರ್ಷಗಳನ್ನು ಪೂರೈಸಿವೆ. ವಿಶ್ವವಿದ್ಯಾನಿಲಯದ 3ನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾರಾಂಗದ ಕಾರ್ಯಚಟುವಟಿಕೆಗಳ ಸದುಪಯೋಗವನ್ನು ಈ ಮೂಲಕ ಎಲ್ಲರೂ ಬಳಸಿಕೊಳ್ಳಲಿ ಎಂಬುದು ನನ್ನ ಆಶಯ.



ಕುಲಸಚಿವರ ಸಂದೇಶ
316288255 3480870788801246 1463466154683815514 n

ಶ್ರೀಮತಿ. ಎಂ.ಕೆ. ಸವಿತಾ, ಕ. ಆ. ಸೇ

ಕುಲಸಚಿವರು

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಪೈಕಿ ಪ್ರಕಟಣೆ ವಿಭಾಗದಲ್ಲಿ ಅಗ್ರಸ್ಥಾನವನ್ನು ಹೊಂದಿರುವ ಹಿರಿಮೆಗೆ ಪಾತ್ರವಾಗಿದೆ. ಈ ಕಾರಣಕ್ಕಾಗಿಯೇ, ಪ್ರಸಾರಾಂಗವನ್ನು ಈ ದೇಶದಲ್ಲಿನ ಅಣೆಕಟ್ಟು ಅಥವಾ ಜಲಾಶಯಕ್ಕೆ ಹೋಲಿಸುತ್ತೇನೆ. ದೊಡ್ಡ ಜನಸಂಖ್ಯೆಗೆ ಸಂಪತ್ತು ಮತ್ತು ಆಹಾರವನ್ನು ಉತ್ಪಾದಿಸಲು ಜಲಾಶಯವು ನೀರನ್ನು ಸಂಗ್ರಹಿಸಿ ವಿಶಾಲವಾದ ಭೂಮಿಗೆ ವಿತರಿಸುವಂತೆಯೇ, ಪ್ರಸಾರಾಂಗವು ಕೂಡ ನಮ್ಮ ಜನರ ಬೌದ್ಧಿಕ ಅಗತ್ಯಗಳನ್ನು ಪೂರೈಸುತ್ತಿದೆ. ಹೀಗಾಗಿ, ಕನ್ನಡಿಗರ ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚಿಸುವಲ್ಲಿ ಇದರ ಕೊಡುಗೆ ಮಹತ್ವದ್ದಾಗಿದೆ. ಇತರ ರಾಜ್ಯಗಳ ಜನರು ಬಂದು ಪ್ರಸಾರಾಂಗದ ಕಾರ್ಯಚಟುವಟಿಕೆಗಳನ್ನು ಗಮನಿಸಿದಾಗ ಅವುಗಳು ಮತ್ತಷ್ಟು ಮುಂದುವರಿಯಲು ಪ್ರೇರೇಪಿಸುವಂತಿದೆ ನಮ್ಮ ಪ್ರಸಾರಾಂಗ.

ನಮ್ಮ ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಮೊದಲಿನಿಂದಲೂ ದಾಖಲಾರ್ಹ ಸಾಧನೆ ಮಾಡಿಕೊಂಡು ಬರುತ್ತಿದೆ. “ಪ್ರಬುದ್ಧ ಕರ್ಣಾಟಕ”,”ವಿಜ್ಞಾನ ಕರ್ಣಾಟಕ”, “ಮಾನವಿಕ ಕರ್ಣಾಟಕ”ಗಳಂತಹ ನಿಯತಕಾಲಿಕೆಗಳನ್ನು ಪ್ರಕಟಿಸಿ ಆ ಮೂಲಕ ಎಲ್ಲಾ ಶಾಖೆಗಳಲ್ಲಿ ಜ್ಞಾನವನ್ನು ಎಲ್ಲಾ ಓದುಗರಿಗೂ ಪಸರಿಸುವ ಕಾರ್ಯಮಾಡುತ್ತಿದೆ. ಈ ವಿಭಾಗ ಇತ್ತೀಚೆಗೆ ತನ್ನದೇ ಆದ ಜಾಲತಾಣವನ್ನು(ವೆಬ್‍ಸೈಟ್) ಪ್ರಾರಂಭಿಸಿ ಆ ಮೂಲಕ ಎಲ್ಲಾ ಆಸಕ್ತ ಓದುಗರಿಗೆ ಮಾಹಿತಿಯನ್ನು ಬೆರಳಿನ ತುದಿಯಲ್ಲಿ ದೊರೆಯುವಂತೆ ಮಾಡಿರುವುದು ಇದರ ಮತ್ತೊಂದು ಸಾಧನೆಯಾಗಿದೆ. ಈ ಜ್ಞಾನದ ಮೂಲವನ್ನು ಎಲ್ಲಾ ಓದುಗರು ಬಳಸಿಕೊಂಡು ನಾಡಿನ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕೆಂದು ಆಶಿಸುತ್ತೇನೆ.



ನಿರ್ದೇಶಕರ ಸಂದೇಶ
20221122 124527 1

ಪ್ರೊ.ನಂಜಯ್ಯ ಹೊಂಗನೂರು

ನಿರ್ದೇಶಕರು

ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ ಎಂದಾದ ಮೇಲೆ ಅದರ ಸಮರ್ಪಕ ಪ್ರಸಾರಕಾರ್ಯ ನಡೆಯಬೇಕಲ್ಲವೆ? ಈ ಹಿನ್ನೆಲೆಯಲ್ಲಿ ತನ್ನ ಸಾಮಥ್ರ್ಯನುಸಾರ ಮಹಾಮಣಿಹವನ್ನಿಟ್ಟುಕೊಂಡು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾದ ಸಂಸ್ಥೆಯೇ ಪ್ರಸಾರಾಂಗ. ಮೈಸೂರು ವಿಶ್ವವಿದ್ಯಾನಿಲಯವು ನಡೆಸಿಕೊಂಡು ಬರುತ್ತಿದ್ದ ಪ್ರಕಟಣಾ ಚಟುವಟಿಕೆಯ ಕೇಂದ್ರಕ್ಕೆ ‘ಪ್ರಸಾರಾಂಗ’ ಎಂದು ನೂತನ ಹೆಸರನ್ನು ಕೊಡುವುದರ ಜೊತೆಗೆ(1933) ಅದಕ್ಕೆ ಹೊಸ ದಿಕ್ಕು ದೆಸೆ ಸೂಚಿಸಿದವರು ಋಷಿಕವಿ, ರಾಷ್ಟ್ರಕವಿ ಕುವೆಂಪು ಅವರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಗತಿಯೊಂದಿಗೆ ಇದು ಸಮಾನವಾಗಿ ಹೆಜ್ಜೆ ಹಾಕಿ ಬೆಳೆದು ಬಂದಿದೆ. ಇದುವರೆಗೆ ಪ್ರಸಾರಾಂಗ ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ 2800 ಪುಸ್ತಕಗಳನ್ನು ಪ್ರಕಟಿಸುವ ಮೂಲಕ ದಾಖಲೆಯ ಸ್ವರೂಪದ ಸಾಧನೆ ಮಾಡಿದೆ. ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಸಿ.ಎ ಮೊದಲಾದ ಪದವಿ ತರಗತಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳನ್ನೂ ಒಳಗೊಂಡಂತೆ ವಿಶ್ವವಿದ್ಯಾನಿಲಯದ ಆಯ್ದ ಸಂಶೋಧನ ಮಹಾಪ್ರಬಂಧಗಳನ್ನು, ಜನೋಪಯೋಗಿಯಾದ ಬೇರೆಬೇರೆ ಕೃತಿಗಳನ್ನು ಪ್ರಕಟಿಸುವ ಮೂಲಕ ವಿಶ್ವವಿದ್ಯಾನಿಲಯದ ಜ್ಞಾನ ಗ್ರಂಥಗಳೆಂಬ ಕಾಲುವೆಗಳ ಮೂಲಕ ಹರಿದು ಸಮಾಜದೆಲ್ಲೆಡೆ ತಲುಪುವಂತಾಗಿದೆ.

ಪ್ರಸಾರಾಂಗವು ಪ್ರಕಟಿಸಿಕೊಂಡು ಬರುತ್ತಿರುವ ಪ್ರಬುದ್ಧ ಕರ್ಣಾಟಕ ಎಂಬ ನಿಯತಕಾಲಿಕೆಗೆ ಈಗ ನೂರು ವರ್ಷ ತುಂಬಿದೆ. ಹಾಗೆಯೇ ಮಾನವಿಕ ಕರ್ಣಾಟಕ ಮತ್ತು ವಿಜ್ಞಾನ ಕರ್ಣಾಟಕಗಳು ಐವತ್ತು ವರ್ಷ ಪೂರೈಸಿ ಸುವರ್ಣಮಹೋತ್ಸವದ ಮಹತ್ವದ ಘಟ್ಟ ತಲುಪಿವೆ!

ಪ್ರಚಾರೋಪನ್ಯಾಸ ಮಾಲೆ ಪ್ರಸಾರಾಂಗದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ. ವಿಶ್ವವಿದ್ಯಾನಿಲಯದಲ್ಲಿ ಉತ್ಪನ್ನವಾದ ಜ್ಞಾನವನ್ನು ತನ್ನ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲೆಲ್ಲ ಉಪನ್ಯಾಸಗಳ ಮೂಲಕ ಪ್ರಸಾರ ಮಾಡುವುದು ಇದರ ಆಶಯ. ವಿಶ್ವಮಟ್ಟದಲ್ಲಿ ಇದು “ಮೈಸೂರು ವಿಶ್ವವಿದ್ಯಾನಿಲಯದ ಪ್ರಯೋಗ” ಎಂದು ಹೆಸರುವಾಸಿಯಾಗಿದೆ. ಈ ಮಾಲೆಯಲ್ಲಿ ಈಗಾಗಲೇ 435ಕ್ಕೂ ಅಧಿಕ ಗ್ರಂಥಗಳು ಪ್ರಕಟವಾಗಿದೆ.

ಪ್ರಸಾರಾಂಗವು ಈಗಾಗಲೇ ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದೆ. ಪ್ರಕಟಿಸುತ್ತಲೂ ಇದೆ. ತನ್ನ ಪ್ರಕಟಣೆಗಳ ಮೂಲಕ ಸಾರ್ಥಕವಾದ ಮಹಾಮಾರ್ಗವನ್ನು ನಿರ್ಮಿಸಿದೆ. ಲೋಕದಲ್ಲಿರುವ ಜ್ಞಾನವನ್ನು ಸಂಗ್ರಹಿಸಿ ತಿರುಗಿ ಈ ಸಮಾಜಕ್ಕೆ ದಾನ ಮಾಡುವ ಪ್ರಕ್ರಿಯೆ ಪ್ರಸಾರಾಂಗದಲ್ಲಿ ನಡೆಯುತ್ತಿದೆ. ಸಂಗ್ರಹವಾದ ಜ್ಞಾನವನ್ನು ಗ್ರಂಥಗಳ ರೂಪದಲ್ಲಿ ಕೊಡುವ ಹೊಣೆಗಾರಿಕೆ ಕೂಡ ಪ್ರಸಾರಾಂಗದ್ದಾಗಿದೆ. ಈ ರೂಪಾಂತರ ಪ್ರಕ್ರಿಯೆ ಪ್ರಸಾರಾಂಗದ ವೈಶಿಷ್ಯವಾಗಿದೆ.

ಪ್ರಸಾರಾಂಗವು ವರ್ತಮಾನದ ಅಗತ್ಯಕ್ಕೆ ತಕ್ಕಂತೆ ನವೀಕೃತಗೊಂಡು ಬೆಳೆಯಬೇಕು ಮತ್ತು ಆದರ ಮಧುರ ಫಲಗಳು ಜನರಿಗೆ ತಲುಪಬೇಕು. ಅಂದಾಗ ಅದನ್ನು ಕಟ್ಟಿದ ಹಿರಿಯರ ಕನಸು ನನಸಾಗುತ್ತದೆ. ಬನ್ನಿ ನಾವೆಲ್ಲ ನಮ್ಮ ಹಿರಿಯರು ಕಂಡ ಕನಸನ್ನು ನನಸಾಗಿಸುವ ಮೂಲಕ ಪ್ರಸಾರಾಂಗದ ಯಶಸ್ಸಿಗೆ ಶ್ರಮಿಸೋಣ.